ಕರ್ನಾಟಕ ಚುನಾವಣೆಗೆ ಒಂದು ಉತ್ತಮ ಆ್ಯಪ್

ಕರ್ನಾಟಕ ವಿಧಾನಸಭಾ ಚುನಾವಣೆ ಇನ್ನೇನು ಹತ್ತಿರದಲ್ಲೆ ಇದೆ. ಮುಂದಿನ ಐದು ವರ್ಷ ನಮ್ಮ ರಾಜ್ಯವನ್ನು ಬೆಳೆಸುವ / ನಡೆಸುವ ಅಧಿಕಾರ ನೀಡುವ ಬಹು ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ. ಎಲ್ಲರು ತಪ್ಪದೆ ಮೇ ಹನ್ನೆರಡರಂದು ಮತ ಚಲಾಯಿಸಿ.

ಇಲ್ಲೊಂದು ಚುನಾವಣೆಗೆ ಸಂಬಂಧಪಟ್ಟ ಅದ್ಭುತ ಆ್ಯಪ್ ಒಂದು ಸದ್ದು ಮಾಡುತ್ತಿದೆ. ಅದರ ಕಿರು ಪರಿಚಯ ಇಲ್ಲಿದೆ. App Link —> Karnataka Elections 2018

Karnataka Elections 2018 ಆ್ಯಪ್ ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಂಬಂಧಪಟ್ಟ ಎಲ್ಲ ವಿಷಯಗಳನ್ನು ಒಂದೇ ಕಡೆ ಸಿಗುವಂತೆ ಮಾಡಿದೆ.

ಇದರಲ್ಲಿ ಎಲೆಕ್ಷನ್ ಗೆ ಸಂಬಂಧಬಪಟ್ಟ ತಾಜ ಸುದ್ದಿಗಳು ಪುಶ್ ನೋಟಿಫಿಕೇಷನ್ ಮೂಲಕ ತಲುಪಲಿವೆ. ಮೂರೂ ಪ್ರಮುಖ ಪಕ್ಷಗಳಾದ ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ನ ಎಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಆ್ಯಪ್ ನ ಮುಖ ಪುಟದಲ್ಲೇ ಲಭ್ಯವಿದೆ.

ಅಲ್ಲದೆ, ನೀವು ತಮ್ಮ ತಮ್ಮ ಕ್ಷೇತ್ರಗಳ ಅಣಕು ಮತದಾನವನ್ನು ಸಹ ಮಾಡಬಹುದು. ಮುಂದಿನ ಮುಖ್ಯಮಂತ್ರಿ ಯಾರಗಬೇಕು ಅನ್ನೊ ಸಮೀಕ್ಷೆಯಲ್ಲೂ ಬಾಗವಹಿಸಬಹುದು.  ಒಂದು ಮೊಬೈಲ್ ಫೋನಿನಿಂದ ಒಂದೇ ಮತ ಹಾಕಲು ಅವಕಾಶ ಇರುವುದರಿಂದ ಯಾವುದೇ ಮೋಸ ಆಗಲು ಸಾಧ್ಯವಿಲ್ಲ. ಅಲ್ಲದೇ ಮತ ಹಾಕಿದವರು ಯಾರು ಎಂಬ ಮಾಹಿತಿ ಯಾರಿಗೂ ತಿಳಿಯುವುದಿಲ್ಲ. ಹಾಗಾಗಿ ಇದೊಂದು ಉತ್ತಮ ಸಮೀಕ್ಷಾ ಸಾಧನ. ಆ್ಯಪ್ ನಿಮ್ಮ ಮೊಬೈಲ್ ಗೆ ಡೌನ್ ಲೋಡ್ ಮಾಡಿದ ಮೇಲೆ ನೀವು ಇದನ್ನು ಪರೀಕ್ಷಿಸಬಹುದು. ಅದರ ಸ್ಕ್ರೀನ್ ಶಾಟ್ ಕೆಳಗೆ ಇದೆ.

ಜೊತೆಗೆ ಈ ಆ್ಯಪ್ ನಲ್ಲಿ ವಿವಿಧ ರಾಜಕೀಯ ಮುಖಂಡರ ಫೇಸ್ ಬುಕ್ ಹಾಗೂ ಟ್ವಿಟ್ಟರ್ ಖಾತೆಗಳ ಲಿಂಕ್ ಇದೆ. ನೀವು ನೇರವಾಗಿ ಮುಖಂಡರನ್ನು ಸಾಮಜಿಕ ಜಾಲತಾಣದಲ್ಲಿ ಭೇಟಿಯಾಗಲು ಬಹು ಸಹಾಯಕಾರಿ. ಇದಷ್ಟೆ ಅಲ್ಲದೆ ಕಳೆದ ೨೦೧೩ರ ವಿಧಾನಸಭಾ ಚುನಾವಣೆಯ ಪೂರ್ತಿ ಫಲಿತಾಂಷ ಲಭ್ಯವಿದೆ. ನಿಮ್ಮ ಕ್ಷೇತ್ರವನ್ನು ಹುಡುಕಿ ಅದರ ಕಳೆದ ಬಾರಿಯ ವಿಜೇತರು ಹಾಗು ಗೆಲುವಿನ ಅಂತರ ತಿಳಿಯಬಹುದು.

ಇದಿಷ್ಟೇ ಅಲ್ಲದೆ ಚುನಾವಣಾ ಫಲಿತಾಂಷದ ದಿನವಾದ ಮೇ ಹದಿನೈದರಂದು ಜನರಿಗೆ ಬಹಳ ಸುಲಭವಾಗಿ ಮುನ್ನಡೆ ಹಾಗು ಗೆಲುವುಗಳ ಬಗ್ಗೆ ತಿಳಿಸಿಕೊಡಲು ಉತ್ತಮ ಯೋಜನೆ ಹಾಕಿಕೊಂಡಿದೆ. ಒಂದೊಂದು ಟಿವಿ ವಾಹಿನಿಯಲ್ಲಿ ಒಂದೊಂದು ಸಂಖ್ಯೆಗಳನ್ನು ಅವರವರ ಮಾಹಿತಿ ಮೇರೆಗೆ ತೋರಿಸಲಾಗುತ್ತದೆ, ಹಾಗಾಗಿ ವೀಕ್ಷಕರು ಚ್ಯಾನಲ್ ಮತ್ತೆ ಮತ್ತೆ ಬದಲಾವಣೆ ಮಾಡಬೇಕಾಗುತ್ತದೆ. ಅದನ್ನು ತಪ್ಪಿಸಲು ಈ  ಆ್ಯಪ್ ನಲ್ಲಿ ಒಂದೇ ಪುಟದಲ್ಲಿ ಯಾವ ಯಾವ ಟಿವಿ ಚಾನಲ್ ನಲ್ಲಿ ಏನು ಫಲಿತಾಂಶ ತೋರಿಸುತ್ತಿದ್ದಾರೆಂದು ಬಿತ್ತರಿಸುತ್ತದೆ. ಹಾಗಾಗಿ ನೀವು ಉತ್ತಮ ಮಾಹಿತಿ ಪಡೆಯಬಹುದು.

ಆ್ಯಪ್ ಮಾತ್ರವೇ ಅಲ್ಲದೆ, ಇವರದ್ದು ಒಂದು ವೆಬ್ ಸೈಟ್ ಕೂಡ ಇದ್ದು, ಹೆಚ್ಚಿನ ಮಾಹಿತಿಗಾಗಿ karnatakaelections2018.com ಗೆ ಭೇಟಿ ನೀಡಿ.

ಈ ಆ್ಯಪ್ ಅನ್ನು ಡೌನ್ ಲೋಡ್ ಮಾಡಲು ಗೂಗಲ್ ಪ್ಲೇ ಸ್ಟೋರ್ ನಲ್ಲಿ “Karnataka Elections 2018” ಎಂದು ಸರ್ಚ್ ಮಾಡಿ ಅಥವಾ ಕೆಳಗಿನ ಕ್ಲಿಂಕ್ ಅನ್ನು ಕ್ಲಿಕ್ ಮಾಡಿ. https://play.google.com/store/apps/details?id=digitaldtech.elections

LEAVE A REPLY

Please enter your comment!
Please enter your name here